ಶುಕ್ರವಾರ, ಫೆಬ್ರವರಿ 8, 2013

ಪ್ರೌಢ ಶಿಕ್ಷಣದಲ್ಲಿ ಬದಲಾವಣೆ ತರುತ್ತಿರುವ IT FOR CHANGE

                                       ಬದಲಾವಣೆಯ ಹೆಜ್ಜೆ  

 ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ    ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಾಥಮಿಕ ಶಿಕ್ಷಣಕ್ಕೆ ಸರ್ವಶಿಕ್ಷಣ ಅಭಿಯಾನದ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡಿದ ಮೇಲೆ , ಮುಂದುವರಿದ ಭಾಗವಾಗಿ ಇಂದು RMSA  ಅಂದರೆ "ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ"ದ ಮೂಲಕವಾಗಿ ರಾಜ್ಯದ ಪ್ರೌಢಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆ. ಆ ಪ್ರಯುಕ್ತ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿರುವ ಪ್ರೌಢಶಿಕ್ಷಣ ಹಂತದಲ್ಲಿ ತರಗತಿ ಕೋಣೆಯ ಕಲಿಕೆಯನ್ನು ಚಟುವಟಿಕೆದಾಯಕವಾಗಿ ಮಾಡುವ ಜೊತೆಗೆ , ಪರಿಣಾಮಕಾರಿಯಾಗಿಯೂ ಮಾಡುವ ಸಲುವಾಗಿ, ಗುಣಾತ್ಮಕ ಶಿಕ್ಷಣವನ್ನು ನೀಡುವ ಸಲುವಾಗಿಯೂ ,  ತಂತ್ರಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡಲಾಗುತ್ತಿದೆ.ತಂತ್ರಜ್ಞಾನ ಆಧಾರಿತ ಕಲಿಕೆಗೆ ಪೂರಕವಾಗಿ ಶಿಕ್ಷಕರನ್ನು ತರಬೇತಿಗೊಳಿಸಲು,ತರಗತಿ ಕೋಣೆಯ ತಮ್ಮ ಸಮಸ್ಯೆಗಳನ್ನು ,ಸವಾಲುಗಳನ್ನು ಎದುರಿಸಲು ಶಿಕ್ಷಕರನ್ನು ಅಣಿಗೊಳಿಸಲಾಗುತ್ತಿದೆ.ಇದಕ್ಕಾಗಿ ರಾಜ್ಯದಲ್ಲಿ RMSA   ಕಾರ್ಯಕ್ರಮದ ಅಡಿ   ಶಿಕ್ಷಕರಿಗಾಗಿ , ವಿಷಯ ಶಿಕ್ಷಕರ ವೇದಿಕೆ ರಚಿಸಲಾಗಿದೆ.ಈಗಾಗಲೇ ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ಶಿಕ್ಷಕರ ವಿಷಯ ವೇದಿಕೆಗಳು  ರಾಜ್ಯ ಮಟ್ಟದಲ್ಲಿ ರಚಿತವಾಗಿವೆ.ಭಾಷಾ ಶಿಕ್ಷಕರ ವೇದಿಕೆಗಳನ್ನು ರಚಿಸಲಾಗುತ್ತಿದೆ.ವಿಷಯ ಶಿಕ್ಷಕರ ವೇದಿಕೆಯನ್ನು ರಚಿಸಿ, ಶಿಕ್ಷಕರಿಗೆ ಗಣಕ ಯಂತ್ರ ಮೂಲಕ ತರಬೇತಿ ನೀಡುವ ಹೊಣೆ ಹೊತ್ತಿರುವ , ಶಿಕ್ಷಕರಿಗೆ ಸಾರ್ವಜನಿಕ ತಂತ್ರಾಂಶವನ್ನು ಪರಿಚಯಿಸುವ ಮೂಲಕ ಬದಲಾವಣೆಯನ್ನು ತರುತ್ತಿರುವ ,ನಮ್ಮನ್ನು ಪ್ರೇರೆಪಿಸಿರುವ ಹೊಣೆಹೊತ್ತಿರುವ IT FOR CHANGE   ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕ್ ನ್ನು  click  ಮಾಡಿರಿ.

IT FOR CHANGE 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ