ಮಂಗಳವಾರ, ಸೆಪ್ಟೆಂಬರ್ 3, 2013

ಅಭಿನಂದನೆಗಳು

ಅಭಿನಂದನೆಗಳು 


ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿ(ಪ್ರಸ್ತುತ ಬೈಂದೂರು ವಲಯ)ನ ಆಲೂರು ಸರಕಾರಿ ಪ್ರೌಢಶಾಲೆ ಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಉದಯ ಕುಮಾರ್ ಶೆಟ್ಟಿ ಇವರಿಗೆ 2012-13 ನೇ ಸಾಲಿನ ಉಡುಪಿ ಜಿಲ್ಲಾ" ಸಮಾಜ ವಿಜ್ಞಾನ ಸಾಧಕ ಶಿಕ್ಷಕ" ಪ್ರಶಸ್ತಿ ದೊರೆತಿದೆ. ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೂ ಸಹ ಅತ್ಯುತ್ತಮ ಸಾಧನೆಯನ್ನು ಸರಕಾರಿ ಪ್ರೌಢಶಾಲೆ ಆಲೂರು,ಉಡುಪಿ ಜಿಲ್ಲೆ ,  ಸಾಧಿಸಿದೆ.ಸಮಾಜ ವಿಜ್ಞಾನದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ 2013ರ ಏಪ್ರಿಲ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಸರಕಾರಿ ಪ್ರೌಢಶಾಲೆ ಆಲೂರು ಸಾಧಿಸುವಲ್ಲಿ   ಶ್ರೀ ಉದಯ ಕುಮಾರ್ ಶೆಟ್ಟಿ ಇವರ ಪಾತ್ರ ಬಹುಮಹತ್ವದ್ದು. ಇವರು ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ವೇದಿಕೆಯ ಪರವಾಗಿ ಹಾರ್ದಿಕ ಅಭಿನಂದನೆಗಳು.